ಕುವೆಂಪು ಸಮಗ್ರ ಸಾಹಿತ್ಯ ೧೧ ಸಂಪುಟಗಳು

ಕುವೆಂಪು ಅವರು ತಮ್ಮ ಜೀವಿತ ಕಾಲದಲ್ಲಿ ರಚಿಸಿದ ಕಾವ್ಯ, ಗದ್ಯ, ನಾಟಕ, ಪ್ರಬಂಧಗಳು, ಕಾದಂಬರಿ, ಮಹಾಕಾವ್ಯ, ಆತ್ಮಚರಿತ್ರೆಯೂ ಸೇರಿದಂತೆ ಸಮಸ್ತ ಸತ್ವಪೂರ್ಣ ಹತ್ತು ಸಾವಿರ ಪುಟಗಳ ಸಾಹಿತ್ಯವೀಗ ಹನ್ನೊಂದು ಸಂಪುಟಗಳಲ್ಲಿ ಲಭ್ಯ

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ, ಕನ್ನಡ ಮಹಾ ಕಾವ್ಯ ಪರಂಪರೆಯ ಮಹೋನ್ನತ ಕೃತಿ ಇದೀಗ ವಿಶೇಷ ಅನುಬಂಧಗಳೊAದಿಗೆ ಹೊಸ ವಿನ್ಯಾಸ ಮತ್ತು ಆಕರ್ಷಕ ಮುದ್ರಣದಲ್ಲಿ ಲಭ್ಯ (ಸಿಡಿ ಸಹಿತ)

ಶ್ರೀರಾಮಾಯಣ ದರ್ಶನಂ ವಿಶೇಷ ಆವೃತ್ತಿ

ಕುವೆಂಪು ಅವರ ಬದುಕು, ಸಾಧನೆಗಳನ್ನು ನೇರವಾಗಿ ಕಣ್ಣಿಗೆ ಕಟ್ಟಿಕೊಡುವ ಅಪೂರ್ವ ಚಿತ್ರಸಂಪುಟ, ಅತ್ಯುತ್ತಮ ಪ್ರಕಟಣೆಗಾಗಿ ರಾಜ್ಯಸರ್ಕಾರದ ಬಹುಮಾನಗಳನ್ನು ಪಡೆದುಕೊಂಡಿರುವ ಅಪೂರ್ವ ಕೃತಿ. ಕನ್ನಡದ ಕವಿಯೊಬ್ಬರ ಬಗ್ಗೆ ಅತ್ಯಂತ ವಿಸ್ತೃತವಾಗಿ ಪ್ರಕಟವಾಗಿರುವ ಏಕೈಕ ಚಿತ್ರಸಂಪುಟ

ಕುವೆಂಪು ಚಿತ್ರಸಂಪುಟ

ಪಶ್ಚಿಮ ಘಟ್ಟದಲ್ಲಿರುವ ಕುವೆಂಪು ಜೈವಿಕಧಾಮದ ಪ್ರಕೃತಿ, ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿ ಸಂಪತ್ತುಗಳ ಅಪರೂಪದ ಮಾಹಿತಿ ಚಿತ್ರಸಂಪುಟ ಆಕರ್ಷಕ ವಿನ್ಯಾಸದಲ್ಲಿ ಲಭ್ಯ

ಕುವೆಂಪು ಮಲೆನಾಡು

ನಾಡಿನ ಪ್ರಸಿದ್ಧ 80 ಗಮಕಿಗಳಿಂದ ಧ್ವನಿ ಮುದ್ರಿಸಲಾಗಿರುವ
“ಶ್ರೀ ರಾಮಾಯಣ ದರ್ಶನಂ” ಕೃತಿಯ ವಾಚನ ಮತ್ತು ವ್ಯಾಖ್ಯಾನದ 80 ಗಂಟೆಗಳ ಡಿವಿಡಿಗಳು ನಿಮ್ಮ ಬದುಕಿನ ಎಲ್ಲ ಸಂದರ್ಭಗಳಲ್ಲೂ ಸವಿಯಬಹುದಾದ ಅಪರೂಪದ ಗಾನಸುಧೆ

DVD

ಶ್ರೀರಾಮಾಯಣ ದರ್ಶನಂ ಡಿ.ವಿ.ಡಿ.ಗಳು

ಕುವೆಂಪು ನಾಡು-ನುಡಿ ವೈಚಾರಿಕತೆ (2016)

ಕುವೆಂಪು ಜನ್ಮದಿನವನ್ನು (ಡಿ.೨೯) ವಿಶ್ವಮಾನವ ದಿನವನ್ನಾಗಿ ರಾಜ್ಯ ಸರ್ಕಾರವು ಘೊಷಿಸಿದ ಹಿನ್ನೆಲೆಯಲ್ಲಿ, ವಿಶ್ವಮಾನವ ಸಂದೇಶದ ಜೊತೆಯಲ್ಲಿ ರೈತಗೀತೆ ಮತ್ತು ನಾಡಗೀತೆಗಳನ್ನೂ ಸೇರಿಸಿ, ನಾಡು ನುಡಿ ಮತ್ತು ವೈಚಾರಿಕತೆಯನ್ನು ಕುರಿತಾದ ಕುವೆಂಪು ಅವರ 14 ಅಗ್ರ ಲೇಖನಗಳ ಈ ಸಂಕಲನ ಪ್ರಕಟವಾಗಿದೆ.

ವಿಶ್ವಮಾನವ ಕುವೆಂಪು (2019)

ಕುಪ್ಪಳಿಯೂ ಸೇರಿದಂತೆ ಅಲ್ಲಲ್ಲಿ ನಡೆಯುವ ಮಂತ್ರಮಾಂಗಲ್ಯ ಮಾದರಿಯ ಮದುವೆಗಳಲ್ಲಿ ಭಾಗವಹಿಸುವ ಜನಸಾಮಾನ್ಯರಿಗೆ, ಮಂತ್ರಮಾಂಗಲ್ಯದ ವಿಶೇಷತೆಯೊಂದಿಗೆ, ವಿಶ್ವಮಾನವ ಸಂದೇಶದ ಜೊತೆಯಲ್ಲಿ ರೈತಗೀತೆ ಮತ್ತು ನಾಡಗೀತೆಗಳನ್ನೂ ಸೇರಿಸಿ, ಕುವೆಂಪು ಅವರ ಬದುಕು-ಬರೆಹ-ಸಾಧನೆಗಳ ಕಿರುಪರಿಚಯ ಮಾಡಿಕೊಡುವ ಕಿರುಪುಸ್ತಿಕೆ ಇದಾಗಿದೆ.

ಆಗಸ್ಟ್‌ 15, 2017 ಸ್ವಾತಂತ್ರ್ಯೋತ್ಸವ ಲಾಲ್‌ಬಾಗ್‌ ಫಲ-ಪುಷ್ಪ ಪ್ರದರ್ಶನವನ್ನು ಕುವೆಂಪು ಸ್ಮರಣಾರ್ಥ ಆಯೋಜಿಸಿದ ಸಂದರ್ಭದಲ್ಲಿ, ಕುವೆಂಪು ಅವರು ಹೂ-ಗಿಡಗಳ ಬಗ್ಗೆ ಬರೆದಿರುವ 50 ಕವಿತೆಗಳು, ನಾಡಗೀತೆ ರೈತಗೀತೆ, ಸ್ವಾಂತ್ರ್ಯದ ಗೀತೆ ಮತ್ತು ವಿಶ್ವಮಾನವ ಸಂದೇಶದೊಂದಿಗೆ ಪ್ರಕಟವಾದ ಸ್ಮರಣಾರ್ಥ ಸಂಕಲನ.

ಕುವೆಂಪು ಪುಷ್ಪಗೀತೆ (2017)

ಕುವೆಂಪು ನುಡಿತೋರಣ

The Bride in the Rainy Mountains (2020)

ಕುವೆಂಪು ಅವರ ಮಹಾಕಾದಂಬರಿದ್ವಯಗಳಲ್ಲಿ ಒಂದಾದ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಇಂಗ್ಲಿಷ್‌ ಅನುವಾದ.

Mantra Mangalya (2019)

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಂತ್ರ ಮಾಂಗಲ್ಯ ಮಾದರಿ ಮದುವೆಗಳು ಕನ್ನಡೇತರರನ್ನು ಗಮನ ಸೆಳೆದು, ಪ್ರೇರೇಪಣೆ ನೀಡುತ್ತಿವೆ. ಕನ್ನಡೇತರರಿಗೆ ಅನುಕೂಲವಾಗುವಂತೆ, ಮಂತ್ರ ಮಾಂಗಲ್ಯ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸಲಾಗಿದೆ

ಕುವೆಂಪು ಮತ್ತು ಕುಪ್ಪಳಿಯನ್ನು, ಕುವೆಂಪು ಪ್ರತಿಷ್ಠಾನವನ್ನು ಇಡಿಯಾಗಿ ಪರಿಚಯಿಸುವ ಮಾಹಿತಿ ಪುಸ್ತಕದ ಇಂಗ್ಲಿಷ್‌ ಆವೃತ್ತಿ.

Kuvempu - Kuppali

ಗಾಂಧಿ 150 : ಕುವೆಂಪು ಮತ್ತಿತರರ ಆಯ್ದ ಬರಹಗಳು

ಮಹಾತ್ಮ ಗಾಂಧಿ 150 ವರ್ಷಾಚರಣೆಯ ಸಂದರ್ಭದಲ್ಲಿ, ಕುವೆಂಪು ಅವರು ಗಾಂಧಿಯವರ ಬಗ್ಗೆ ಬರೆದಿರುವ ಕವನ-ಲೇಖನಗಳ ಜೊತೆಯಲ್ಲಿ, ನಾಡಿನ ಹಿರಿಯ ಸಾಹಿತಿಗಳ ಆಯ್ದ ಕವಿತೆಗಳನ್ನೂ ಸಂಪಾದಿಸಿ ಪ್ರಕಟವಾಗಿರುವ ಗಾಂಧಿ ಸ್ಮರಣಾರ್ಥ ಕೃತಿ

ಕುವೆಂಪು ಕುಪ್ಪಳಿ ಕವಿಶೈಲ

(ಮಾಹಿತಿ ಪುಸ್ತಕ -ಕನ್ನಡ ಮತ್ತು ಇಂಗ್ಲಿಷಿನಲ್ಲಿ)

ಕುವೆಂಪು ಮತ್ತು ಕುಪ್ಪಳಿಯನ್ನು, ಕುವೆಂಪು ಪ್ರತಿಷ್ಠಾನವನ್ನು ಇಡಿಯಾಗಿ ಪರಿಚಯಿಸುವ ಮಾಹಿತಿ ಪುಸ್ತಕ.

ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ಸ್ಮಾರಕ -ಪರಿಚಯ ಪುಸ್ತಕ

ವಿಶ್ವಮಾನ ಸಂದೇಶದೊಂದಿಗೆ, ಕುವೆಂಪು ಅವರ ಜನ್ಮಸ್ಥಳ ಹಿರೆಕೊಡಿಗೆ ಮತ್ತು ಜನ್ಮಸ್ಥಳ ಸ್ಮಾರಕದ ಪರಿಚಯ ಪುಸ್ತಕ.

ಕುವೆಂಪು ಸಾಕ್ಷ್ಯಚಿತ್ರ

(ಕನ್ನಡ ಮತ್ತು ಇಂಗ್ಲಿಷಿನಲ್ಲಿ)

ಕುವೆಂಪು ಮತ್ತು ಅವರನ್ನು ರೂಪಿಸಿದ ಸಹ್ಯಾದ್ರಿಯ ಮಡಿಲಿನ ಕುಪ್ಪಳಿಯ ಕವಿಮನೆ, ಕವಿಶೈಲ ಹಾಗೂ ಮತ್ತಿತರ ಸ್ಮಾರಗಳನ್ನು ಕುರಿತಾದ (ಕನ್ನಡ ಮತ್ತು ಇಂಗ್ಲಿಷ್)‌ ಸಾಕ್ಷ್ಯ ಚಿತ್ರ.