ತಮ್ಮ ಬದುಕು ಮತ್ತು ಸಾಹಿತ್ಯಕ ಸಾಧನೆಗಳಿಂದ ಮಹತ್ಸಾಧನೆ ಮಾಡುತ್ತಿದ್ದರೂ ಕುವೆಂಪು ಎಂದೂ ಕೀರ್ತಿಯ ಬೆನ್ನು ಬಿದ್ದವರಲ್ಲ. ಅದನ್ನು ’ಕೀರ್ತಿಶನಿ ತೊಲಗಾಚೆ’ ಎಂದು ದೂರವಿರಿಸಿದ್ದರು. ದೇಶ-ವಿದೇಶಗಳಿಂದ, ವಿಶ್ವವಿದ್ಯಾಲಯಗಳಿಂದ ಆಮಂತ್ರಣವಿದ್ದರೂ ಅವರೆಂದೂ ಜಗತ್ತು ಸುತ್ತುವ ಲೋಭಕ್ಕೆ ಒಳಗಾಗಲಿಲ್ಲ. ಒಮ್ಮೆ, ದೀಕ್ಷಾಯಾತ್ರೆ ಕೈಗೊಂಡು ಕೊಲ್ಕತ್ತಾಕ್ಕೆ, ಮತ್ತೊಮ್ಮೆ ಜ್ಞಾನಪೀಠ ಸಂಸ್ಥೆಯ ಒತ್ತಾಯಕ್ಕೆ ಮಣಿದು, ಪ್ರಶಸ್ತಿ ಸ್ವೀಕಾರಕ್ಕಾಗಿ ನವದೆಹಲಿಗೆ ಹೋಗಿದ್ದು ಬಿಟ್ಟರೆ ಮತ್ತೆಂದೂ ಕರ್ನಾಟಕದ ಹೊರಗೆ ಅವರು ಪ್ರಯಾಣಿಸಲೇ ಇಲ್ಲ. ಮೈಸೂರಿನ ಉದಯರವಿಯಲ್ಲಿಯೇ ವಲ್ಮೀಕರಾಗಿ ಕುಳಿತು ಸಾಧನೆಗೈದರು. ಆದರೆ, ಕರ್ನಾಟಕದ ಸಾಂಸ್ಕೃತಿಕ ಜಗತ್ತು ತಾನು ಕಂಡ ಹೊಸಬೆಳಕಿಗೆ ಕಾರಣನಾದ ಕವಿಯನ್ನು ಮರೆಯಲಿಲ್ಲ. ಸರ್ಕಾರವೊಂದು ಸುಮಾರು ಮೂರೂವರೆ ಸಾವಿರ ಎಕರೆ ಅರಣ್ಯ ಪ್ರದೇಶವನ್ನೊಳಗೊಂಡ ಜೈವಿಕಧಾಮಕ್ಕೆ ಕವಿಯೊಬ್ಬನ ಹೆಸರನ್ನು, ಅವರ ಗೌರವಾರ್ಥ ನಾಮಕರಣ ಮಾಡಿರುವುದು ಅವರ ಒಟ್ಟಾರೆ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಭಾರತ ಮತ್ತು ಭಾರತದಾಚೆಗೂ ಅವರ ಕೀರ್ತಿ ಪತಾಕೆ ವಿಸ್ತರಿಸಿದ್ದು ಈಗ ಇತಿಹಾಸ. ಕುವೆಂಪು ಅವರ ಉಪಸ್ಥಿತಿಗಿಂತ ಅನುಪಸ್ಥಿತಿಯಲ್ಲಿಯೇ ಅವರಿಗೆ ಹಾಗೂ ಅವರ ಸಾಹಿತ್ಯಕ್ಕೆ ಸಂದ ಪ್ರಶಸ್ತಿ ಗೌರವಗಳು ಹೆಚ್ಚು!
ಪ್ರಶಸ್ತಿ ಪುರಸ್ಕಾರಗಳು
|
ಸಮ್ಮೇಳನ ಗೌರವ |
|
|
೧೯೨೮ |
ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಕವಿಸಮ್ಮೇಳನದ ಅಧ್ಯಕ್ಷತೆ |
|
೧೯೩೩ |
ಹುಬ್ಬಳ್ಳಿಯಲ್ಲಿ ನಡೆದ ೧೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ |
|
೧೯೫೬ |
ಮೈಸೂರಿನಲ್ಲಿ ನಡೆದ ೩೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷ ಸ್ಥಾನ |
|
೧೯೫೭ |
ಧಾರವಾಡದಲ್ಲಿ ನಡೆದ ೩೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ |
|
೧೯೮೫ |
ಪ್ರಥಮ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಗೌರವ |
|
ಸಾಹಿತ್ಯಕ ಪ್ರಶಸ್ತಿ ಗೌರವಗಳು |
|
|
೧೯೫೫ |
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ |
|
೧೯೬೪ |
ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ ಪುರಸ್ಕಾರ |
|
೧೯೬೮ |
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪುರಸ್ಕಾರ |
|
೧೯೭೯ |
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ |
|
೧೯೮೮ |
ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿಯ ಗೌರವ |
|
ಅಭಿನಂದನಾ ಗ್ರಂಥ ಗೌರವ |
|
|
೧೯೬೮ |
ಗಂಗೋತ್ರಿ |
|
೧೯೭೫ |
ಸಹ್ಯಾದ್ರಿ |
|
ಭಾರತ ಸರ್ಕಾರದಿಂದ |
|
|
೧೯೫೮ |
ಭಾರತ ಸರ್ಕಾರದಿಂದ ಪದ್ಮಭೂಷಣ ಪುರಸ್ಕಾರ |
|
೧೯೮೮ |
ಭಾರತ ಸರ್ಕಾರದಿಂದ ಪದ್ಮವಿಭೂಷಣ ಗೌರವ |
|
೨೦೧೭ |
ಭಾರತ ಸರ್ಕಾರ ಅಂಚೆ ಇಲಾಖೆಯಿಂದ ಕವಿಯ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ |
|
ಕರ್ನಾಟಕ ಸರ್ಕಾರದಿಂದ |
|
|
೧೯೮೭ |
ಕವಿಯ ಗೌರವಾರ್ಥ ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆ |
|
೧೯೯೨ |
ಪ್ರಥಮ ‘ಕರ್ನಾಟಕ ರತ್ನ’ಗೌರವ |
|
೧೯೯೨ |
ಕುಪ್ಪಳಿಯಲ್ಲಿ ’ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಪ್ರಾರಂಭ |
|
೨೦೦೪ |
’ಕುವೆಂಪು ಶತಮಾನೋತ್ಸವ ವರ್ಷ’ ಸಂಭ್ರಮಾಚರಣೆ |
|
ಇತರೆ |
|
|
೧೯೬೦ |
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ’ಮಾನಸ ಗಂಗೋತ್ರಿ’ಯ ಉದ್ಘಾಟನೆ |
|
೧೯೭೪ |
ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣ |
|
೧೯೮೬ |
ಶ್ರೀ ವಂಕಟೇಶ್ವರ ದೇವಸ್ಥಾನ ಪಿಟ್ಸ್ ಬರ್ಗ್ ಯು.ಎಸ್.ಎ. ಯಿಂದ ಗೌರವ ಸಮರ್ಪಣೆ |
|
೧೯೮೯ |
ಸ್ಯಾನ್ ಆಂಟೊನಿಯೋ ಅಮೆರಿಕಾ ಕುವೆಂಪು ಕನ್ನಡ ಕೂಟದ ವತಿಯಿಂದ ಗೌರವ ಸಮರ್ಪಣೆ |
|
೧೯೯೨ |
ಶಿವಮೊಗ್ಗ ಕರ್ನಾಟಕ ಸಂಘದಿಂದ ಗೌರವ ಸಮರ್ಪಣೆ |
|
೧೯೯೪ |
ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಗೆ ಕವಿಯ ಗೌರವಾರ್ಥ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಂದು ಮರುನಾಮಕರಣ. |
|
೧೯೯೪ |
ಮಂಗಳೂರು ಲಯನ್ಸ್ ಕ್ಲಬ್ ಅವರಿಂದ ಮರಣೋತ್ತರವಾಗಿ ಶತಮಾನದ ವ್ಯಕ್ತಿ ಗೌರವ ಸಮರ್ಪಣೆ |
|
೨೦೧೩ |
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ’ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಸ್ಥಾಪನೆ |
|
೨೦೧೭ |
ಬೆಂಗಳೂರು ಲಾಲ್ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಕುವೆಂಪು ಸ್ಮರಣಾರ್ಥ ಏರ್ಪಡಿಸಿದ್ದು |
